Union Bank Recruitment 2025: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Union Bank Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
Union Bank Recruitment 2025 ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
- ವೇತನ ಶ್ರೇಣಿ: 48,480 ರೂ. ರಿಂದ ರೂ.85,920 ರೂ.
- ಹುದ್ದೆಗಳ ಸಂಖ್ಯೆ: 500
- ಉದ್ಯೋಗ ಸ್ಥಳ: ಅಖಿಲ ಭಾರತ
ಹುದ್ದೆಗಳ ವಿವರ:
- ಸ್ಪೆಷಲಿಸ್ಟ್ ಆಫೀಸರ್ಸ್
- ಅಸಿಸ್ಟಂಟ್ ಮ್ಯಾನೇಜರ್ (Credit): 250 ಹುದ್ದೆಗಳು
- ಅಸಿಸ್ಟಂಟ್ ಮ್ಯಾನೇಜರ್ (IT): 250 ಹುದ್ದೆಗಳು
ಶೈಕ್ಷಣಿಕ ಅರ್ಹತೆ:
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಈ ಕೆಳಗಿನ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿರಬೇಕು:
- ಅಸಿಸ್ಟಂಟ್ ಮ್ಯಾನೇಜರ್ (ಕ್ರೆಡಿಟ್): CA, CMA, CS, MBA, MMS, PGDM, PGDBM, ಪದವಿ.
- ಅಸಿಸ್ಟಂಟ್ ಮ್ಯಾನೇಜರ್ (IT): B.E ಅಥವಾ B.Tech, MCA, M.Sc, M.S, M.Tech (ಕಂಪ್ಯೂಟರ್ ಸೈನ್ಸ್, ಐಟಿ, ಎಲೆಕ್ಟ್ರಾನಿಕ್ಸ್, ಇತ್ಯಾದಿ).
ವಯೋಮಿತಿ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಗರಿಷ್ಠ 30 ವರ್ಷ ಮೀರಿರಬಾರದು (01-ಏಪ್ರಿಲ್-2025 ರಂತೆ).
ವೇತನ ಶ್ರೇಣಿ: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಧಿಸೂಚನೆ ನಿಯಮಗಳ ಪ್ರಕಾರ 48,480 ರೂ. ರಿಂದ ರೂ.85,920 ರೂ. ನಿಗದಿಪಡಿಸಿದ್ದಾರೆ.
ಅರ್ಜಿ ಶುಲ್ಕ:
- SC/ST/PwBD ಅಭ್ಯರ್ಥಿಗಳಿಗೆ: 177/- ರೂ.
- ಇತರೆ ಎಲ್ಲಾ ಅಭ್ಯರ್ಥಿಗಳಿಗೆ: 1,180/- ರೂ.
- ಪಾವತಿ ವಿಧಾನ: ಆನ್‌ಲೈನ್
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 30-04-2025
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 20-05-2025
ಪ್ರಮುಖ ಲಿಂಕ್‌ಗಳು:
- ಅಧಿಸೂಚನೆ: ಡೌನ್ಲೋಡ್
- ಅರ್ಜಿ ನಮೂನೆ: Apply ಮಾಡಿ
- ಅಧಿಕೃತ ವೆಬ್ ಸೈಟ್: unionbankofindia.co.in
