ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯಡಿ ಅರ್ಜಿ ಆಹ್ವಾನ; ಸಿಗಲಿದೆ 1 ಲಕ್ಷ ರೂ. ನೆರವು; 50% ಸಬ್ಸಿಡಿ; ಅರ್ಜಿ ಸಲ್ಲಿಕೆ ಹೇಗೆ?

SMM MEDIA

ಸ್ವಯಂ ಉದ್ಯೋಗ ಕೈಗೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕೆನ್ನುವುದು ಎಲ್ಲರ ಹಂಬಲ. ಹೀಗಾಗಿ ಸರ್ಕಾರ ಸ್ವಯಂ ಉದ್ಯೋಗ ಕೈಗೊಳ್ಳುವ ಯುವಕರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಿದೆ. ಈ ನಿಟ್ಟಿನಲ್ಲಿ ಸ್ವಯಂ ಉದ್ಯೋಗ ನೇರ ಸಾಲ ಯೋಜನೆಯನ್ನು ಜಾರಿಗೊಳಿಸಿದೆ. ಕರ್ನಾಟಕ ಸರ್ಕಾರವು ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಸಹಾಯ ನೀಡುವ ಯೋಜನೆ ಇದಾಗಿದೆ. ಯೋಜನೆಯಡಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಯಾವೆಲ್ಲಾ ಉದ್ದೇಶಕ್ಕೆ ಸಾಲ ಸೌಲಭ್ಯ ಲಭ್ಯವಿದೆ. ಸಹಾಯಧನ ಎಷ್ಟು ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ತಿಳಿಯೋಣ.


ಏನಿದು ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ?

"ಸ್ವಯಂ ಉದ್ಯೋಗ ನೇರ ಸಾಲ ಯೋಜನೆ"ಯನ್ನು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುವ ಕರ್ನಾಟಕ ಚರ್ಮ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತವು ಜಾರಿಗೆ ತಂದಿದೆ. ಪರಿಶಿಷ್ಟ ಜಾತಿ ಮಾದಿಗ ಮತ್ತು ಸಂಬಂದಿತ ಜಾತಿಗೆ ಸೇರಿದ ನಿರುದ್ಯೋಗಿಗಳು ಕುರಿ/ ಹಂದಿ/ ಮೊಲ ಸಾಕಾಣಿಕೆ ಇತ್ಯಾದಿ ಕಿರು ಆರ್ಥಿಕ ಚಟುವಟಿಕೆಗಳಿಗೆ ಹಾಗೂ ರೈತರಿಂದ ತರಕಾರಿ, ಹಣ್ಣುಗಳನ್ನು ಖರೀದಿ ಮಾಡಿ ತಳ್ಳುವ ಗಾಡಿ ಮೂಲಕ ಮಾರಾಟ ಮಾಡಿ ಸ್ವಯಂ ಉದ್ಯೋಗ ಕೈಗೊಂಡು ಆದಾಯಗಳಿಸಲು ಅವಶ್ಯವಿರುವ ಸಾಲ ಮತ್ತು ಸಹಾಯಧನವನ್ನು ನಿಗಮದಿಂದ ಮಂಜೂರು ಮಾಡಲಾಗುವುದು.

ಅರ್ಜಿ ಆಹ್ವಾನ

ಪ್ರಸ್ತುತ ಈ ಯೋಜನೆಯಡಿ ಸ್ವಯಂ ಉದ್ಯೋಗಕ್ಕಾಗಿ ನೇರ ಸಾಲಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿಯ ನಿರುದ್ಯೋಗಿಗಳಿಗೆ ಇಲಾಖೆಯ ಆಯಾ ನಿಗಮಗಳ ಅಡಿಯಲ್ಲಿ ಸ್ವಯಂ ಉದ್ಯೋಗ ನೇರಸಾಲ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಕಿರು ಆರ್ಥಿಕ ಚಟುವಟಿಕೆಗಳಿಗೆ ನೇರಸಾಲ ನೀಡಲಾಗುವುದು ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸಲು ಸೆ.10, 2025 ಕೊನೆಯ ದಿನವಾಗಿದೆ.

ಯೋಜನೆಗೆ ಅರ್ಹತಾ ಮಾನದಂಡಗಳು

ಈ ಯೋಜನೆಯಡಿ ಪರಿಶಿಷ್ಟ ಜಾತಿಯ ಮಾದಿಗ ಜಾತಿಗೆ ಸೇರಿದ ನಿರುದ್ಯೋಗಿ ಪುರುಷರು ಮತ್ತು ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವನ್ನು ಒದಗಿಸಲಾಗುವುದು.

ಫಲಾನುಭವಿಗಳಿಗೆ ಸಣ್ಣಪುಟ್ಟ ವ್ಯಾಪಾರದ ಚಟುವಟಿಕೆಗಳಾದ ಪೆಟ್ಟಿ ಅಂಗಡಿ, ಸಿದ್ಧ ಉಡುಪುಗಳ ಅಂಗಡಿ, ಕುರಿ ಮತ್ತು ಮೇಕೆ ಸಾಕಣೆ, ಮೀನುಗಾರಿಕೆ, ಹಣ್ಣು ಮತ್ತು ತರಕಾರಿ ಅಂಗಡಿ, ಟೈಲರಿಂಗ್ ಮುಂತಾದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಅನುಕೂಲ ಕಲ್ಪಿಸಲು ಯೋಜನೆಯಡಿ ಸಾಲವನ್ನು ನೀಡಲಾಗುತ್ತಿದೆ.

ಯೋಜನೆಯ ಘಟಕ ವೆಚ್ಚ 1.00 ಲಕ್ಷ ರೂ.ಗಳಾಗಿದ್ದು, ಈ ಪೈಕಿ 50 ಲಕ್ಷ ರೂ. ಸಹಾಯಧನ ಮತ್ತು 50 ಲಕ್ಷ ರೂ. ಸಾಲವಾಗಿರುತ್ತದೆ.

ಸಾಲದ ಮೊತ್ತವನ್ನು ಶೇ. 4ರ ಬಡ್ಡಿದರದಲ್ಲಿ 30 ಸಮಾನ ಕಂತುಗಳಲ್ಲಿ ನಿಗಮಕ್ಕೆ ಮರು ಪಾವತಿಸಬೇಕಾಗುತ್ತದೆ.

ಅರ್ಜಿದಾರರ ಅರ್ಹತೆಗಳು

ಅರ್ಜಿದಾರರು ಪರಿಶಿಷ್ಟ ಜಾತಿಯ ಮಾದಿಗ ಮತ್ತು ಸಂಬಂಧಿತ ಜಾತಿಗಳಿಗೆ ಸೇರಿದವರಾಗಿರಬೇಕು.

ಆದಿ ಕರ್ನಾಟಕ, ಆದಿ ಆಂದ್ರ, ಆದಿ ದ್ರಾವಿಡ ಎಂಬ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿದಲ್ಲಿ ಕಡ್ಡಾಯವಾಗಿ ಮೂಲ ಜಾತಿಯನ್ನು ನಮೂದಿಸಿ ಸ್ವಯಂ ಘೋಷಣೆ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.

ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.

ಅರ್ಜಿದಾರರು/ ಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಈ ಹಿಂದೆ ನಿಗಮದಿಂದ ಸೌಲಭ್ಯ ಪಡೆದಿದ್ದಲ್ಲಿ, ಅಂತಹ ಫಲಾನುಭವಿಗಳು ಅರ್ಹರಿರುವುದಿಲ್ಲ.

ಅರ್ಜಿದಾರರು/ ಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ ನೌಕರಿಯಲ್ಲಿರಬಾರದು.

ಅರ್ಜಿದಾರರು ಘಟಕವನ್ನು ಸ್ಥಾಪಿಸಲು ಅವಶ್ಯವಿರುವ ಸ್ಥಳಾವಕಾಶವನ್ನು ಹೊಂದಿರಬೇಕು.

ನಿಯಮಗಳು:

ಅರ್ಜಿದಾರರು ಆಯ್ಕೆ ಸಮಿತಿಯಿಂದ ಆಯ್ಕೆಯಾಗಿರಬೇಕು.

ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದವರಿಗೆ ರೂ.1.50 ಲಕ್ಷ ಹಾಗೂ ನಗರ ಪ್ರದೇಶದವರಿಗೆ ರೂ.2.00 ಲಕ್ಷಗಳ ಮಿತಿಯೊಳಗಿರಬೇಕು.

ಅರ್ಜಿದಾರರು 21 ವರ್ಷದಿಂದ 50 ವರ್ಷದವರೆಗಿನ ವಯೋಮಾನದವರಾಗಿರಬೇಕು.

ಉದ್ದೇಶಿತ ವ್ಯಾಪಾರ /ಚಟುವಟಿಕೆ ಆಧಾರದ ಮೇಲೆ ಸಾಲ/ಸಹಾಯಧನ ಮಂಜೂರು ಮಾಡಲಾಗುವುದು.

ಮಂಜೂರಾತಿ ಪಡೆದ ಫಲಾನುಭವಿಯು ಅನರ್ಹರೆಂದು ಕಂಡು ಬಂದಲ್ಲಿ ಮಂಜೂರಾತಿಯನ್ನು ಯಾವುದೇ ಹಂತದಲ್ಲಿ ರದ್ದುಪಡಿಸಲಾಗುತ್ತದೆ.

ಸಹಾಯಧನ ಮತ್ತು ಸಾಲವನ್ನು ನೇರವಾಗಿ ಫಲಾನುಭವಿಗಳಿಗೆ/ಮಾರಾಟಗಾರರಿಗೆ ಬಿಡುಗಡೆ ಮಾಡಲಾಗುವುದು.

Post a Comment

Cookie Consent
We serve cookies on this site to analyze traffic, remember your preferences, and optimize your experience.
AdBlock Detected!
Site is Blocked
Sorry! This site is not available in your country.
';console.log('Time Zone: '+dtctCntry);if(dtctCntry===blkCntry){setInterval(function(){addCt(getid('cntryBlk'),'visible')},1000);}}checkCntry();