ಅಧಿಸೂಚನೆಯ ಅಡಿಯಲ್ಲಿ ಒಟ್ಟು 996 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಡಿಸೆಂಬರ್ 2 ರಿಂದ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಕೆಳಗಿನ ಇತರ ವಿವರಗಳನ್ನು ಪರಿಶೀಲಿಸಿ..
ವಿವರಗಳು ಹೀಗಿವೆ
- VP ವೆಲ್ತ್ (SRM) ಹುದ್ದೆಗಳ ಸಂಖ್ಯೆ: 506
- AVP ವೆಲ್ತ್ (RM) ಹುದ್ದೆಗಳ ಸಂಖ್ಯೆ: 206
- ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ ಹುದ್ದೆಗಳ ಸಂಖ್ಯೆ: 284

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಹುದ್ದೆಗಳ ಪ್ರಕಾರ ಸಂಬಂಧಿತ ವಿಭಾಗದಲ್ಲಿ ಪದವಿ ಪಡೆದಿರಬೇಕು. ಅಲ್ಲದೆ, ಅಧಿಸೂಚನೆಯಲ್ಲಿ ಉಲ್ಲೇಖಿಸಿರುವಂತೆ ಅವರು ಸಂಬಂಧಿತ ಕೆಲಸದ ಅನುಭವವನ್ನು ಹೊಂದಿರಬೇಕು.
ಪ್ರಮುಖ ದಿನಾಂಕಗಳು
- SBI SO ನೇಮಕಾತಿ 2025 ಅಧಿಸೂಚನೆ ಡಿಸೆಂಬರ್ 2, 2025
- SBI SCO ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ದಿನಾಂಕ 2025 ಡಿಸೆಂಬರ್ 2, 2025
- ಅರ್ಜಿ ನೋಂದಣಿ ಮುಕ್ತಾಯ ಡಿಸೆಂಬರ್ 23, 2025
- ಪರೀಕ್ಷಾ ಶುಲ್ಕವನ್ನು ಪಾವತಿಸಿ ಕೊನೆಯ ದಿನಾಂಕ ಡಿಸೆಂಬರ್ 23, 2025
SBI ನೇಮಕಾತಿ 2025:
- ಹುದ್ದೆಯ ಹೆಸರು: ಸ್ಪೆಷಲಿಸ್ಟ್ ಕೇಡರ್ ಆಫೀಸರ್
- ಹುದ್ದೆಗಳ ಸಂಖ್ಯೆ: 996
- ಉದ್ಯೋಗ ಸ್ಥಳ: ಅಖಿಲ ಭಾರತ
- ಅಧಿಕೃತ ವೆಬ್‌ಸೈಟ್: https://sbi.bank.in/
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 02-12-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 23-12-2025
- ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 23-12-2025
ವಿದ್ಯಾರ್ಹತೆ:
- ಪದವಿ, MBA ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು.
ವಯೋಮಿತಿ:
ಅಭ್ಯರ್ಥಿಯು ಗರಿಷ್ಠ ವಯಸ್ಸು 42 ವರ್ಷಗಳನ್ನು ಹೊಂದಿರಬೇಕು.
ಅರ್ಜಿ ಶುಲ್ಕ:
- SC/ST/PwBD ಅಭ್ಯರ್ಥಿಗಳಿಗೆ: ಇರುವುದಿಲ್ಲ
- ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ: ₹750/-
- ಪಾವತಿ ವಿಧಾನ: ಆನ್ಲೈನ್
ವೇತನ ಶ್ರೇಣಿ:
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ₹51,600 – 3,72,500/- ವೇತನ ನೀಡಲಾಗುತ್ತದೆ.
ಆಯ್ಕೆ ವಿಧಾನ:
- ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ
- ಸಂದರ್ಶನ
ವಿವಿಧ ವರ್ಗಗಳಲ್ಲಿನ ಹುದ್ದೆಗಳನ್ನು ಅವಲಂಬಿಸಿ ಅಭ್ಯರ್ಥಿಗಳ ವಯಸ್ಸಿನ ಮಿತಿ ಮೇ 1, 2025 ರಂತೆ 20 ರಿಂದ 42 ವರ್ಷಗಳ ನಡುವೆ ಇರಬೇಕು. OBC ಗಳಿಗೆ 3 ವರ್ಷಗಳು, SC, ST ಗಳಿಗೆ 5 ವರ್ಷಗಳು ಮತ್ತು PWBD ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇದೆ. ಈ ಅರ್ಹತೆಗಳನ್ನು ಹೊಂದಿರುವ ಯಾರಾದರೂ ಡಿಸೆಂಬರ್ 23, 2025 ರೊಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ರೂ. 750 ಪಾವತಿಸಬೇಕು. ಎಸ್ಸಿ, ಎಸ್ಟಿ ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಅಭ್ಯರ್ಥಿಗಳ ಅಂತಿಮ ಆಯ್ಕೆಯು ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ಸಂದರ್ಶನವನ್ನು ಆಧರಿಸಿರುತ್ತದೆ. ಕೆಳಗಿನ ಅಧಿಸೂಚನೆಯಲ್ಲಿ ಇತರ ವಿವರಗಳನ್ನು ಪರಿಶೀಲಿಸಿ.
